ಊಟಿ ಚಿನ್ನದ ಗಣಿ E

ಊಟಿ ಚಿನ್ನದ ಗಣಿ:


ಇದು ಹಟ್ಟಿ ಚಿನ್ನದ ಗಣಿಯ ಈಶಾನ್ಯಕ್ಕೆ 22 ಕೀ.ಮಿ ದೂರದಲ್ಲಿದೆ ಇದರ ಗಣಿ ಗುತ್ತಿಗೆ ಸಂಖ್ಯೆ : 2126 ಅಗಿದ್ದು ಇದು 47.96 ಹೆಕ್ಟೇರ್ ಪ್ರದೇಶವನ್ನು ಹೊಂದಿದೆ. ಇದು ಈ ಹಿಂದೆ ಜಿ.ಎಸ್.ಐ, ಎಂಇಸಿಎಲ್ ಹಾಗೂ ಹಚಿಗ ಸಂಸ್ಥೆಗಳ ಅನ್ವೇಷಣಾ ಕಾರ್ಯಗಳಿಂದ ಪರಿಶೋಧಿಸಿಲ್ಪಟ್ಟಿದೆ. ಪ್ರಸ್ತುತ ಇಲ್ಲಿ ಗಣಿ ಅಭಿವೃದ್ಧಿ ಚಟುವಟಿಕೆಗಳು ಹಾಗೂ ಗಣಿಗಾರಿಕೆಯ ಕಾರ್ಯ ಪ್ರಗತಿಯಲ್ಲಿದೆ.
ಸದರಿ ಪ್ರದೇಶದಲ್ಲಿ 09 ಅದಿರುಯುಕ್ತ ಚಿನ್ನದ ಶಿಲಾ ಶ್ರೇಣಿಗಳನ್ನು ಅನ್ವೇಷಿಸಲಾಗಿದೆ. ಇವುಗಳಲ್ಲಿ ಹಟ್ಟಿ ಚಿನ್ನದ ಗಣಿಯು ಊಟಿ ಚಿನ್ನದ ಗಣಿ ಯೋಜನೆಯನ್ನು ಚಿನ್ನದ ಶಿಲಾಶ್ರೇಣಿಗಳಾದ ನಂ: 2, 3 ಹಾಗೂ 4 ರಲ್ಲಿ ಪ್ರಾರಂಭಿಸಿತು ಇದು 660 ಮೀಟರ್ ಸ್ಟ್ರೆಕ್ ಲೆಂತ್‍ನ್ನು ಹೊಂದಿತ್ತು.
ಹಟ್ಟಿ ಚಿನ್ನದ ಗಣಿಯು ಚಿನ್ನದ ಶಿಲಾ  ಶ್ರೇಣಿ ನಂ : 4 ರಲ್ಲಿ 90 ಮೀಟರ್ ಆಳದವರೆಗೆ ಓಪನ್ ಕಾಸ್ಟ್ ಮೈನಿಂಗನ್ನು 300 ಮೀ ಸ್ಟ್ರೆಕ್ ಲೆಂತ್‍ನವರೆಗೆ ಪ್ರಾರಂಭಿಸಿತು.
ಓಪನ್ ಕಾಸ್ಟ್ ಗಣಿಗಾರಿಕೆಯಲ್ಲಿ ಅದಿರು ದೊರೆಯುವ ಅನುಪಾತ ಇತರ ತ್ಯಾಜ್ಯ ಶಿಲೆಗಳ ದೊರೆಯುವಿಕೆ ಹೋಲಿಸಿದಾಗ ಕಡಿಮೆಯಾಯಿತು. ಇದನ್ನು ಗಮನದಲ್ಲಿಟ್ಟುಕೊಂಡು ಓಪನ್ ಕಾಸ್ಟ್ ಮೈನಿಂಗನ್ನು ಸ್ಥಗಿತಗೊಳಿಸಲಾಯಿತು.
ಮುಂದೆ ಚಿನ್ನದ ಶಿಲಾ ಶ್ರೇಣಿ ನಂ: 4 ರ ದಕ್ಷಿಣ ಭಾಗದಲ್ಲಿ 360 ಮೀಟರ್ ಸ್ಟ್ರೆಕ್ ಲೆಂತನಲ್ಲಿ ಓಪನ್ ಕಾಸ್ಟ್ ಮೈನಿಂಗ್ ಮಾಡುವ ಪ್ರಸ್ತಾವನೆ ಕೊಡ ಇದೆ. ಇದರೊಡನೆ ಈ ಮುಂದೆ ಭೂ-ಕೆಳಮೈ ಗಣಿ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳುವ ಉದ್ದೇಶದಿಂದ 3 ಘಿ 2 ಮೀಟರ್ ವಿಸ್ತೀರ್ಣದ ಸರ್ವೀಸ್ ಶಾಫ್ಟ್‍ನ್ನು 270 ಮೀಟರ್ ಅಡಿಯವರೆಗೆ ಹಾಗೂ ಎಂಇಸಿಎಲ್ ಶಾಫ್ಟ್‍ನ್ನು 278 ಮೀಟರ್ ಅಡಿಯವರೆಗೆ ತೆರೆಯಲಾಯಿತು.
ಲೊಡ್ ನಂ: 2 ಹಾಗೂ ಲೊಡ್ ನಂ: 3 ರಲ್ಲಿ ಗಣಿಗಾರಿಕೆಯನ್ನು ಎರಡು ಪರಿಶೋಧನ್ಮಾಕ ಶಾಫ್ಟಗಳು ಹಾಗೂ 165 ಮೀಟರ್ ಆಳದವರೆಗೆ ತೆರೆದ ಇಳಿಜಾರಿನ ಶಾಫ್‍ನ ಮೂಲಕ ಕೈಗೊಳ್ಳಲಾಯಿತು. ಉಪ ಮಟ್ಟದ ಗಣಿಗಾರಿಕೆ ಕಾರ್ಯಗಳು ಸಹ ಪ್ರಾರಂಭಗೊಂಡಿವೆ. ಈ ಗಣಿಯಲ್ಲಿ 31/03/2020 ರವರೆಗೆ ಅಂದಾಜಿಸಲಾದ ಅದಿರಿನ ಪ್ರಮಾಣವು 2.23 ಮೀಲಿಯನ್ ಟನ್‍ಷ್ಟು ಇದ್ದು ಇದರಲ್ಲಿ 2.57 ಗ್ರಾಂ ಪ್ರತಿ ಟನ್ ಅದಿರಿನ ಅಂಶವಿದೆ.

ಇತ್ತೀಚಿನ ನವೀಕರಣ​ : 10-07-2021 10:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080